`ಬುಲೆಟ್ ರಾಣಿ` ಸೀಡಿ ಬಿಡುಗಡೆ
Posted date: 21 Tue, Jul 2015 – 10:37:20 AM

 ಫ಼ೋಕಸ್ ಆನ್ ಪಿಕ್ಚರ್ಸ್ ಲಾಂಛನದಲ್ಲಿ ಸಲ್ಲಾವುದ್ದೀನ್ ಯುಸಫ಼ ಅವರು ನಿರ್ಮಿಸುತ್ತಿರುವ ‘ಬುಲೆಟ್ ರಾಣಿ ಚಿತ್ರದ ಹಾಡುಗಳ ಸೀಡಿ ಕಳೆದವಾರ ಬಿಡುಗಡೆಯಾಗಿದೆ. ಗುಣವಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಪ್ರಥಮಪ್ರತಿ ಸಿದ್ದವಾಗುತ್ತಿದ್ದು, ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಸಾಜೀದ್ ಕುರೇಶಿ ಅವರು ನಿರ್ದೇಶಿಸುತ್ತಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸೆಲ್ವಂ ಅವರ ಛಾಯಾಗ್ರಹಣವಿದೆ. ಸುರೇಶ್ ಸಂಕಲನ, ವೇಣುಪಾಲ್ ನೃತ್ಯ ನಿರ್ದೇಶನ, ಮಾಸ್‌ಮಾದ ಸಾಹಸ ನಿರ್ದೇಶನ ಹಾಗೂ ನಾಗು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ನಾಗೇಶ್ವರರಾವ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಪ್ರಿಯಾಂಕ(ನಿಶಾ) ಕೊಠಾರಿ, ಆಶೀಷ್ ವಿದ್ಯಾರ್ಥಿ, ರವಿಕಾಳೆ, ಅಮಿತ್, ಶಫ಼ಿ, ರಮೇಶ್, ಪ್ರತಾಪ್, ರಾಜೇಶ್, ವಿವೇಕ್, ಉದಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed